Friday, March 28, 2014

"Big fight ವೇಳೆ small fight "

ಲೋಕ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ
ನಗರದ ನೆಹರು ಮೈದಾನಿನಲ್ಲಿ ಗುರುವಾರ ಸಂಜೆ
ಸುವರ್ಣ ವಾಹಿನಿಯ 'ಬಿಗ್ ಫೈಟ್' ಕಾರ್ಯಕ್ರಮದ
ಚಿತ್ರೀಕರಣ ಸಂದರ್ಭದಲ್ಲಿ
ಸಭಿಕರೊಬ್ಬರು ಜಿಲ್ಲಾ ಉಸ್ತುವಾರಿ ಸಚಿವ ಬಿ.
ರಮಾನಾಥ ರೈ ಅವರಿಗೆ ಕಲ್ಲಡ್ಕ ಪ್ರಭಾಕರ ಭಟ್
ಅವರ ಬಗ್ಗೆ ಪ್ರಶ್ನೆ ಕೇಳಿದ್ದರಿಂದ
ಎರಡು ತಂಡಗಳೊಳಗೆ ಘರ್ಷಣೆ ಸಂಭವಿಸಿ 'ಸ್ಮಾಲ್
ಫೈಟ್' ಗೆ ಕಾರಣವಾಗಿ
ಚಿತ್ರೀಕರಣವು ಗೊಂದಲದಲ್ಲಿ
ಮುಕ್ತಾಯಗೊಂಡಿತು.
ಕಾಂಗ್ರೆಸ್ ಮತ್ತು ಬಿಜೆಪಿ
ಕಾರ್ಯಕರ್ತರು ಪರಸ್ಪರ ಘರ್ಷಣೆಯಲ್ಲಿ ತೊಡಗಿ
ಕುರ್ಚಿಗಳನ್ನು ಎತ್ತಿಕೊಂಡು ಹೊಡೆದಾಟದಲ್ಲಿ
ನಿರತರಾದ ಕಾರಣ ಪೊಲೀಸರು ಲಘು ಲಾಠಿ
ಪ್ರಹಾರ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ
ತಂದರು.
ಘಟನೆ ವಿವರ: ಸಂಜೆ 4 .30 ಕ್ಕೆ 'ಬಿಗ್ ಫೈಟ್'
ಕಾರ್ಯಕ್ರಮದ ಚಿತ್ರೀಕರಣ ಆರಂಭಗೊಂಡಿತ್ತು.
ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವ
ಬಿ. ರಮಾನಾಥ ರೈ, ಬಿಜೆಪಿಯಿಂದ ವಿಧಾನ ಪರಿಷತ್
ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್, ಆಮ್ ಆದ್ಮಿ
ಪಕ್ಷದ ಲೋಕ ಸಭಾ ಚುನಾವಣೆಯ ಅಭ್ಯರ್ಥಿ
ಎಂ.ಆರ್. ವಾಸುದೇವ, ಸಿಪಿಐಎಂ ಅಭ್ಯರ್ಥಿ
ಯಾದವ ಶೆಟ್ಟಿ ಅವರು ಚರ್ಚೆಯಲ್ಲಿ
ಭಾಗವಹಿಸಿದ್ದರು.
ಸಂಜೆ 5.45 ರ ವೇಳೆಗೆ ಅಂದರೆ ಕಾರ್ಯಕ್ರಮದ
ಕೊನೆಯ ಹಂತದಲ್ಲಿ ಸಾರ್ವಜನಿಕರ ಪ್ರಶ್ನೆಗೆ
ನಾಯಕರ ಉತ್ತರ ಕಾರ್ಯಕ್ರಮದಲ್ಲಿ
ಮೂರು ಮಂದಿ ಪ್ರಶ್ನೆ ಕೇಳಿದ್ದು,
ನಾಲ್ಕನೆಯವರಾಗಿ ಎಸ್ಡಿಪಿಐ
ಕಾರ್ಯಕರ್ತರೊಬ್ಬರು ಎದ್ದು ನಿಂತು ಸಚಿವ
ರಮಾನಾಥ ರೈ ಅವರಿಗೆ 'ಚುನಾವಣೆಯ
ಸಂದರ್ಭದಲ್ಲಿ
ನೀವು 'ಇದು ನಾನು ಮತ್ತು ಕಲ್ಲಡ್ಕ ಪ್ರಭಾಕರ
ಭಟ್ಟರ ನಡುವಣ ಸಮರ' ಎಂದಿದ್ದೀರಿ.
ಚುನಾವಣೆಯಲ್ಲಿ ಗೆದ್ದು ಬಂದು ಸಚಿವರಾದ
ನೀವು ಪ್ರಭಾಕರ ಭಟ್ಟರ ವಿರುದ್ಧ ಕ್ರಮ
ಜರಗಿಸುವ ಭರವಸೆಯನ್ನು ನೀಡಿದ್ದೀರಿ. ಆದರೆ
ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಕಾರಿ
ಭಾಷಣ
ಮಾಡುವುದನ್ನು ಮುಂದುವರಿಸಿದ್ದರೂ ಇದುವರೆಗೆ
ನಿಮ್ಮ ಸರಕಾರ ಅವರನ್ನೇಕೆ ಬಂಧಿಸಿಲ್ಲ.
ನೀವು ಮುಸ್ಲಿಮರಿಗೆ ಮೋಸ ಮಾಡುತ್ತಿದ್ದೀರಿ'
ಎಂದು ನೇರ ಪ್ರಶ್ನೆ ಕೇಳಿದರು.
ಅಷ್ಟರಲ್ಲಿ ಅಲ್ಲಿ ಹಾಜರಿದ್ದ ಬಿಜೆಪಿಯ
ಕಾರ್ಯಕರ್ತರು ಮತ್ತು ಕಾಂಗ್ರೆಸ್
ಕಾರ್ಯಕರ್ತರು ಪರಸ್ಪರ ಆರೋಪ
ಪ್ರತ್ಯಾರೋಪದಲ್ಲಿ ತೊಡಗಿದರು.
ಚುನಾವಣೆಯ ವಿಚಾರ
ಮಾತನಾಡುವುದನ್ನು ಬಿಟ್ಟು ಇಂತಹ ವೈಯಕ್ತಿಕ
ವಿಚಾರ ಬೇಡ ಎಂದು ಸಂಘಟಕರು ಮನವಿ
ಮಾಡಿದರೂ ಅದಕ್ಕೆ ಯಾರೂ ಸೊಪ್ಪು ಹಾಕಿಲ್ಲ.
ಅಷ್ಟರಲ್ಲಿ ಕಾರ್ಯಕರ್ತರೊಬ್ಬರು ಒಂದು ಹಿಡಿ
ಮಣ್ಣನ್ನು ಎಸೆದ ಘಟನೆ ಸಂಭವಿಸಿದ್ದು, ಇದ
ಸಂಘರ್ಷ ತೀವ್ರಗೊಳ್ಳಲು ಕಾರಣವಾಯಿತು.
ನೂಕಾಟ, ತಳ್ಳಾಟ ನಡೆದು ಎರಡೂ ಕಡೆಯಿಂದ
ಕುರ್ಚಿಗಳನ್ನು ಎತ್ತಿ ಎಸೆಯಲಾಯಿತು.
ಅಷ್ಟರಲ್ಲಿ ಪೊಲೀಸರು ಆಗಮಿಸಿ ಲಘು ಲಾಠಿ
ಚಾರ್ಚ್ ಮಾಡಿ ಅಲ್ಲಿ ಸೇರಿದ್ದ
ಜನರನ್ನು ಚದುರಿಸಿದರು.
By:-#kaushi js shetty (hindu rockss)

No comments:

Post a Comment