ಕಲ್ಲಡ್ಕದಲ್ಲಿ ಕುರುಕ್ಷೇತ್ರ,
ಗುಂಪುಗಳ ನಡುವೆ ಮಾರಾಮಾರಿ
ನಡೆದಿದ್ದೇನು?
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್
ಹಾಗೂ ಗೋಳ್ತಮಜಲು ವಲಯ ಕಾಂಗ್ರೆಸ್
ವತಿಯಿಂದ ಕಲ್ಲಡ್ಕದ ಮೇಲಿನ ಪೇಟೆ
ಜಂಕ್ಷನ್ನಲ್ಲಿ ಕಾಂಗ್ರೆಸ್ ಸಾಮರಸ್ಯ
ಸಭೆಯನ್ನು ಆಯೋಜಿಸಲಾಗಿತ್ತು. ಸಚಿವ
ರಮನಾಥ ರೈ, ಸೇರಿದಂತೆ ಪಕ್ಷ ಪ್ರಮುಖರಾದ
ಬಿಎಚ್ ಖಾದರ್. ಚಂದ್ರಪ್ರಕಾಶ್ ಶೆಟ್ಟಿ,
ಮಮತಾಗಟ್ಟಿ, ಹರಿಕೃಷ್ಣ ಬಂಟ್ವಾಳ್, ಮಿಥುನ್
ರೈ, ಪಿಯುಸ್ ಎಲ್ ರೊಡ್ರಿಗಸ್, ವಸಂತಿ ಚಂದಪ್ಪ,
ಎಂ.ಎಸ್. ಮಹಮ್ಮದ್, ಹೇಮನಾಥ ಶೆಟ್ಟಿ ಕಾವು,
ಪದ್ಮನಾಭ ರೈ, ಯಶವಂತಿ ಆಳ್ವ ಮಾಯಿಲಪ್ಪ
ಸಾಲ್ಯಾನ್, ಪದ್ಮಶೇಖರ್ ಜೈನ್ ಮೊದಲಾದ
ನಾಯಕರು ಸಭಾ ವೇದಿಕೆಯಲ್ಲಿ ಹಾಜರಿದ್ದರು.
250ಕ್ಕಿಂತಲೂ ಅಧಿಕ ಮಂದಿ ಪಕ್ಷ
ಕಾರ್ಯಕರ್ತರು ಕಾರ್ಯಕಮದಲ್ಲಿ
ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ
ಮಾತನಾಡುತ್ತಿದ್ದ ವೇಳೆ ಜಿ.ಪಂ. ಸದಸ್ಯ
ಚಂದ್ರಪ್ರಕಾಶ್ ಶೆಟ್ಟಿ ರಾಷ್ಟ್ರೀಯ
ಸ್ವಯಂ ಸೇವಕ ಸಂಘದ ಮುಖಂಡ ಡಾ.
ಪ್ರಭಾಕರ್ ಭಟ್ ಅವರನ್ನು ಕಟುವಾಗಿ
ಟೀಕಿಸಿದರು. ಮಾತ್ರವಲ್ಲದೆ ತನ್ನ
ಭಾಷಣದುದ್ದಕ್ಕೂ ಪ್ರಭಾಕರ್ ಭಟ್
ಅವರನ್ನು ನಿಂದಿಸಿದರು. ಇದನ್ನು ವಿರೋಧಿಸಿದ
ಒಂದು ತಂಡ ಸಭೆ ನಡೆಯುತ್ತಿದ್ದಲ್ಲಿಗೆ ಆಗಮಿಸಿ
ಭಾಷಣ ನಿಲ್ಲಿಸುವಂತೆ ಪೊಲೀಸರಲ್ಲಿ
ಒತ್ತಾಯಿಸಿದ್ದಲ್ಲದೆ ಪೊಲೀಸರೊಂದಿಗೆ
ಮಾತಿನ ಚಕಮಕಿ ಆರಂಭಿಸಿತ್ತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ
ಕಾಂಗ್ರೆಸ್ ಯವ ಕಾರ್ಯಕರ್ತರು ಸಭೆಯಿಂದ
ಎಂದು ಬಂದಿದ್ದು ಪೊಲೀಸರ
ಸಮ್ಮುಖದಲ್ಲಿಯೇ ಎರಡೂ ತಂಡಗಳ ನಡುವೆ
ಮಾತಿನ ಚಕಮಕಿ,
ತಳ್ಳಾಟಗಳು ಆರಂಭವಾದವು.
ಪೊಲೀಸರು ಅವರನ್ನು ನಿಯಂತ್ರಸಲು ಪ್ರಯತ್ನಿಸದರೂ ಬೆರಳೆಣಿಕೆಯ
ಪೊಲೀಸರು ಮಾತ್ರ ಸ್ಥಳದಲ್ಲಿ ಹಾಜರಿದ್ದ
ಪರಿಣಾಮ ನಿಯಂತ್ರಣ ಅಸಾಧ್ಯವಾಯಿತು.
ಎರಡೂ ಗುಂಪುಗಳ ಮಧ್ಯೆ ಕಲ್ಲೂ ತೂರಾಟ,
ಸೋಡಾ ಬಾಟ್ಲಿ ತೂರಾಟ
ಪ್ರಾರಂಭಗೊಂಡು ಕಲ್ಲಡ್ಕ
ಕೆಲಕ್ಷಣದಲ್ಲೇ ರಣರಂಗದಂತಾಯಿತು.
ಕೃಪೆ:- # kaushi js shetty. (Hindu rockss)
Full news for visit
Www.kaushijstulunadu.blogspot.com
Sunday, March 9, 2014
"ಕಲಡ್ಕ ದಲ್ಲಿ ನಡೆದದ್ದು ಏನು?"
Subscribe to:
Post Comments (Atom)
No comments:
Post a Comment