Thursday, March 27, 2014

"ಮೋದಿ ಆಲೆ ತುಳು ನಾಡಿನಲ್ಲಿ "

ಮಲ್ಪೆ ಸಮುದ್ರ ತೀರದ ಶೆಡ್ ಕೆಳಗೆ ಕುಳಿತ
ಐದಾರು ಮೀನುಗಾರರು ಇಸ್ಪೀಟ್
ಆಡುತ್ತಿದ್ದರು . ‘ ಚುನಾವಣೆಯ ಕಾವು ಹೇಗಿದೆ ’
ಎಂದು ಪ್ರಶ್ನಿಸಿದಾಗ , ‘ ನಾವೆಲ್ಲ ಬಿಜೆಪಿಗೆ ಮತ
ಹಾಕುವುದು ’ ಎಂಬ ಸ್ಪಷ್ಟ ಉತ್ತರ ಬಂತು .
‘ ಕಾಂಗ್ರೆಸ್ಗಿಂತ ಬಿಜೆಪಿ ಅಭ್ಯರ್ಥಿ
ಚೆನ್ನಾಗಿದ್ದಾರಾ ?’ ಎಂಬ ಪ್ರಶ್ನೆಗೆ, ‘ ಬಿಜೆಪಿ
ಮುಖ್ಯವಲ್ಲ . ಮೋದಿ ಬರಬೇಕು’ ಎಂಬ ಖಡಕ್
ಮಾತು . ಸಮುದ್ರಕ್ಕೆ ಇಳಿಯಲು ದೋಣಿಗೆ ಡೀಸೆಲ್
ತುಂಬಿಸುತ್ತಿದ್ದ ಯುವಕ ಮಿಥುನ್ ಮಲ್ಪೆ , ‘
ದೇಶಕ್ಕೆ
ಬದಲಾವಣೆ ಬೇಕಿದೆ ’ ಎಂದರು .
ಪಕ್ಕದಲ್ಲೇ ಇದ್ದ
ಹಿರಿಯ ಲೋಕೇಶ್ ಕುಮಾರ್ ,
‘ ನಮ್ಮದು ಕಾಂಗ್ರೆಸ್ಸೇ , ಆದ್ರೆ ಈ ಸಲ ಬಿಜೆಪಿಗೆ
ಹಾಕುವಾ ಅಂತಾ ’ ಎಂದು ರಾಗ ಎಳೆದರು .
ದೋಣಿಯಿಂದ ಮೀನು ಇಳಿಸುತ್ತಿದ್ದ, ಬಲೆ
ಬಿಡಿಸುತ್ತಿದ್ದ ಯಾರನ್ನೂ ಕೇಳಿ ದರೂ ‘
ಮೋದಿಗೆ
ನಮ್ಮ ಮತ’ ಎಂಬ ಉತ್ತರವೇ ಸಿಗುತ್ತಿತ್ತು.
‘ ಕಾಂಗ್ರೆಸ್ ಶಾಸಕ ಪ್ರಮೋದ್ ಮಧ್ವರಾಜ್
ನಿಮ್ಮ
ಸಮುದಾಯಕ್ಕೆ ( ಮೊಗವೀರ )
ಸೇರಿದವರಲ್ಲವೇ ?
ಜಯ ಪ್ರಕಾಶ್ ಹೆಗ್ಡೆ ಒಳ್ಳೆಯವರು ಎಂಬ
ಮಾತಿದೆಯಲ್ಲ’ ಎಂದರೆ , ‘ ಅವರು ಮೂರು ಸಲ
ಸೋತಿದ್ರಲ್ಲ . ಹಾಗೆ ಅವ್ರಿಗೆ ಮತ
ಕೊಟ್ಟಿದ್ದೆವು .
ಸೆಂಟರ್ನಲ್ಲಿ ಬಿಜೆಪಿ ಬರಬೇಕು ’ ಎಂಬ
ಉತ್ತರವೇ ಮತ್ತೆ ಸಿಕ್ಕಿತು .
ಪಡುಬಿದ್ರೆ ಸಮೀಪ ಉಡುಪಿ ಪವರ್
ಕಾರ್ಪೊರೇಷನ್
ಲಿಮಿಟೆಡ್ನ ಶಾಖೋ ತ್ಪನ್ನ ವಿದ್ಯುತ್ ಸ್ಥಾವರ
ಇರುವ ನಂದಿಕೂರಿಗೆ ಬಂದಾಗ , ಉಷ್ಣ ವಿದ್ಯುತ್
ಸ್ಥಾವ ರದ ವಿರುದ್ಧ ಹೋರಾಟ ನಡೆಸು ತ್ತಿ ರುವ
ಜನ
ಜಾಗೃತಿ ಸಮಿತಿಯ ಪ್ರಧಾನ ಕಾರ್ಯದರ್ಶಿ
ಜಯಂತ­
ಕುಮಾರ್ ಉಪಾಧ್ಯ ಭೇಟಿಯಾದರು .
‘ ಈ ಸಲ ಇಲ್ಲಿ ಎಲ್ಲರೂ ಬಿಜೆಪಿಗೆ ಮತ
ಹಾಕುವುದು’
ಅಂದರು ಅವರು . ‘ ಇಲ್ಲಿಯೂ ಮೋದಿ ಪ್ರಭಾವ
ಇದೆಯಾ ’ ಎಂದರೆ , ‘ ಅಲ್ಲ , ಶೋಭಾ ಬೆಸ್ಟ್
ಕ್ಯಾಂಡಿಡೇಟ್. ಪವರ್ ಮಿನಿಸ್ಟರ್ ಆಗಿದ್ದಾಗ
ಸ್ಥಾವರದ್ದು ಒಂದ್ ಘಟಕ ಕೆಲ್ಸ್ ಮಾಡ್ದಾಗೆ ತಡೆ
ಕೊಟ್ರು . ಈ ಕಂಪೆನಿಯವ್ರು ಮಾಲಿನ್ಯ
ಮಾಡ್ತಿದಾರೆ ಅಂತ ಅವ್ರಿಂದ್ ಕಡ್ಮೆ ದುಡ್ಡಿಗೆ
ಪವರ್
ತಕ್ಕೊಂಡ್ರು . ಇದ್ರ್ ( ಉಷ್ಣ ಸ್ಥಾವರ )
ಗಲಾಟೆ
ಇತ್ತಲ್ಲ . ಕುಮಾರ್ಸ್ವಾಮಿ ಸಿ ಎಂ ಆದಾಗ
ಎಲ್ಲಾ ಎಮ್ಮೆಲ್ಲೆಗಳ ಸಭೆ ಮಾಡಿದ್ರು .
ಜಯಪ್ರಕಾಶ್
ಹೆಗ್ಡೆ ಬಿಟ್ಟು ಎಲ್ಲಾ ಎಮ್ಮೆಲ್ಲೆಗಳು ಸ್ಥಾವರ
ಅಪೋಸ್ ಮಾಡಿದ್ರು . ಯಾಕಂದ್ರೆ
ಇದು ನಾಗಾ ರ್ಜುನ ಕಂಪೆನಿದ್ದು . ಆಂಧ್ರದ
ಕಾಂಗ್ರೆಸ್ ಎಂಪಿದ್ದು. ನೋಡಿ ಅವ್ರು ಒಳಗೊಳ್ಗೆ
ಅವ್ರ ಪರ ’ ಎನ್ನುತ್ತ ಮಾತು ನಿಲ್ಲಿಸಿದರು .
ಉಷ್ಣ ವಿದ್ಯುತ್ ಸ್ಥಾವರದಿಂದ ಹೊರ ಬರುವ
ಉಪ್ಪುಮಿಶ್ರಿತ ಹಬೆ ನೀರು ತಮ್ಮ ಆರೋಗ್ಯಕ್ಕೆ
ಹಾನಿ ಮಾಡಿದ್ದನ್ನು, ಕಲ್ಲಿದ್ದಲಿನ
ನೀರು ಭತ್ತದ
ಗದ್ದೆಗಳನ್ನು ಹಾಳು ಮಾಡಿದ್ದನ್ನು,
ನಂದಿಕೂರಿನ
ಜನ ಜೀವನೋಪಾಯಕ್ಕಾಗಿ ಆಶ್ರಯಿಸಿದ್ದ
ಮಲ್ಲಿಗೆ
ಕೃಷಿಗೆ ಕುತ್ತು ಬಂದಿದ್ದನ್ನು ವಿವರಿ ಸುವಾಗ
ಅವರ
ಗಂಟಲು ಕಟ್ಟಿಬಂದಿತ್ತು. ಪಡುಬಿದ್ರಿಯ
ಶ್ರೀನಿವಾಸ್ ರಾವ್ , ಮೋದಿಯ ಮುಖ
ನೋಡಿಯೇ ತಾವು ಮತ ಹಾಕುವುದು ಅಂದರು .
News by :- # chethan kulal

No comments:

Post a Comment