ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಈ
ಬಾರಿ ಲೋಕಸಭಾ ಚುನಾವಣೆಯಲ್ಲಿ
'ಯಕ್ಷಗಾನ ಶೈಲಿ'ಯ ಪ್ರಚಾರಕ್ಕೆ ಸಿದ್ಧತೆ
ನಡೆಸಿದೆ. ಯಕ್ಷಗಾನದ ಮೂಲ ಆಶಯ
ಇರಿಸಿಕೊಂಡು ತಯಾರಿಸಲಾದ ನರೇಂದ್ರ
ಮೋದಿ ಹಾಗೂ ಪಕ್ಷದ ಚುನಾವಣ ಪ್ರಚಾರದ
ಧ್ವನಿ ಸುರುಳಿಯನ್ನು ಗುರುವಾರ ದ. ಕ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಡುಗಡೆ
ಮಾಡಲಾಯಿತು. ನರೇಂದ್ರ ಮೋದಿ, ಅಭಿವೃದ್ಧಿ,
ದೇಶದ ಭದ್ರತೆ, ನೇತ್ರಾವತಿ ನದಿ ತಿರುವಿನ
ಬಗ್ಗೆ ಪಕ್ಷದ ನಿಲುವು, ಇದಕ್ಕಾಗಿ ಬಿಜೆಪಿಯ
ಅವಶ್ಯಕತೆ ಇದೆಲ್ಲದರ ಬಗ್ಗೆ
ಧ್ವನಿಸುರುಳಿಯಲ್ಲಿ ತಿಳಿಸಲಾಗಿದೆ.
ಕಟೀಲು ಮೇಳದ ಪ್ರಧಾನ ಭಾಗವತ ಪಟ್ಲ
ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ ಈ ಸಿ.ಡಿ.
ಮೂಡಿಬಂದಿದೆ. ಯಕ್ಷಗಾನ ಕಲಾವಿದ ಸಿದ್ದಕಟ್ಟೆ
ವಿಶ್ವನಾಥ ಶೆಟ್ಟಿ ಹಾಡುಗಳ ರಚನೆ
ಹಾಗೂ ನಿರೂಪಣೆ ನಿರ್ವಹಿಸಿದ್ದಾರೆ. ಪ್ರಶಾಂತ್
ಶೆಟ್ಟಿ ವಗೆನಾಡು ಚೆಂಡೆಯಲ್ಲಿ
ಹಾಗೂ ಲವಕುಮಾರ್ ಮದ್ದಳೆಯಲ್ಲಿ
ಸಹಕರಿಸಿದ್ದಾರೆ. ಸುಮಾರು 35 ನಿಮಿಷಗಳ ಈ
ಧ್ವನಿಸುರುಳಿಯಲ್ಲಿ 16 ಹಾಡುಗಳಿವೆ. ಪ್ರತಿ
ಎರಡು ಹಾಡಿಗೆ ಒಮ್ಮೆ ವಿವರಣೆ ಇದೆ.
ಕೃಪೆ:-#kaushi js shetty (hindu rockss)
No comments:
Post a Comment