ತುಳು ಅಕಾಡೆಮಿಯ ಸದಸ್ಯತ್ವ:
ಕಾಂಗ್ರೆಸಿಗರಿಂದ ನವೀನ್ ಪಡೀಲ್ಗೆ ಅವಮಾನ
ತುಳು ಸಾಹಿತ್ಯ ಆಕಾಡೆಮಿಗೆ ಅಧ್ಯಕ್ಷರು,
ಸದಸ್ಯರ ನೇಮಕವಾದ ಬಳಿಕವೂ ರಗಳೆ
ಮುಂದುವರಿದಿದೆ. ಸದಸ್ಯತ್ವದ ನಿರೀಕ್ಷೆ
ಹುಟ್ಟಿಸಿ ಅವಮಾನಿಸಿದ ಬಗ್ಗೆ ತುಳು ನಾಟಕ
ಕಲಾವಿದ ನವೀನ್ ಪಡೀಲ್ ಬೇಸರ
ವ್ಯಕ್ತಪಡಿಸಿದ್ದಾರೆ.
ತುಳು ಭಾಷೆಗೆ ಕೊಡುಗೆ ನೀಡಿ
ದವರನ್ನು ಅಕಾಡೆಮಿಯ
ಅಧ್ಯಕ್ಷರು ಮತ್ತು ಸದಸ್ಯರನ್ನಾಗಿಸುವುದು ವಾಡಿಕೆ.
ಈ ಬಾರಿಯೂ ಹಾಗೆಯೇ ಆಗಲಿದೆ
ಎಂದು ನಿರೀಕ್ಷಿಸಲಾಗಿತ್ತು. ಆದರೆ
ಆದುದೆಲ್ಲವೂ ಉಲ್ಟಾ. ಅದೇನೆ ಇರಲಿ
ತುಳು ಭಾಷೆಗೆ ನೈಜ ಕೊಡುಗೆ
ನೀಡಿದವರನ್ನು ಕರೆದು ಅವಮಾನಿಸುವ
ಕೆಲಸವನ್ನು ಕಾಂಗ್ರೆಸಿಗರು ಮಾಡಿದ್ದಾರೆ ಎಂಬ
ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.
ಇದಕ್ಕೊಂದು ಉದಾಹರಣೆ ನವೀನ್ ಡಿ. ಪಡೀಲ್.
ನವೀನ್ ಪಡೀಲ್ ನಾಟಕ, ಚಲನ ಚಿತ್ರಗಳಲ್ಲಿ
ಬಿಡುವಿಲ್ಲದೆ ತೊಡಗಿ ಕೊಂಡಿರುವ ಕಲಾವಿದ.
ಇವರಿಗೆ ತುಳು ಆಕಾಡೆಮಿಯ ಸದಸ್ಯರಾಗುವ
ಆಕಾಂಕ್ಷೆಯೂ ಇರಲಿಲ್ಲ. ಆದರೆ ಅದೊಂದು ದಿನ
ಕಾಂಗ್ರೆಸ್ ನಾಯಕರಾದ ರವಿಶಂಕರ್ ಆಳ್ವ
ಮತ್ತು ಪಿ.ವಿ.ಮೋಹನ್ ಕರೆ ಮಾಡಿ
ನಿಮ್ಮನ್ನು ತುಳು ಸಾಹಿತ್ಯ ಅಕಾಡೆಮಿಯ
ಸದಸ್ಯರಾಗಿ ಆಯ್ಕೆ ಮಾಡಲಾಗಿದೆÉ. ನಿಮ್ಮ
ಬಯೋಡಾಟಾ ಕಳುಹಿಸಿ ಕೊಡಿ
ಎಂದು ತಿಳಿಸಿದ್ದರು.
ಕೇಳದೆ ಸದಸ್ಯತ್ವ ಕೊಡುವಷ್ಟು ಉದಾರತೆಯ
ಆಡಳಿತ ನಡೆಯುತ್ತಿದೆ ಯಲ್ಲ ಎಂಬ ಹರ್ಷ
ನವೀನ್ ಪಡೀಲ್ಗೆ ಮಾತ್ರವಲ್ಲ, ತುಳು ಕಲಾವಿ
ದರಿಗೆ ಆಗಿತ್ತು. ನವೀನ್ ಪಡೀಲ್
ಬಯೋಡಾಟಾ ಕನ್ನಡ ಮತ್ತು ಸಂಸ್ಕøತಿ
ಇಲಾಖೆಗೆ ಕಳುಹಿಸಿದ್ದರು. ಆದರೆ ಸದಸ್ಯರ ಪಟ್ಟಿ
ಬಿಡುಗಡೆಯಾಗುವಾಗ ಪಡೀಲ್ ಹೆಸರೇ ಇರಲಿಲ್ಲ.
ತನ್ನ ಹೆಸರು ಇಲ್ಲ
ಎಂಬುದು ಸದಾ ಕೆಲಸದಲ್ಲಿಯೇ ಇರುವ
ಪಡೀಲ್ನಂತಹ ಕಲಾವಿದನಿಗೆ ದೊಡ್ಡ ವಿಷಯವಾಗಿ
ಕಾಣಲಿಲ್ಲ. ಪಕ್ಷದ ಕಾರ್ಯಕರ್ತರಿಗೆ ಆದ್ಯತೆ
ನೀಡಿರಬಹುದು. ಬೇರೆ ಇನ್ಯಾವುದೋ ಕಾರಣಕ್ಕೆ
ಸದಸ್ಯತ್ವ
ನಿರಾಕರಿಸಿರಬಹುದು ಎಂದು ಅವರು ನಿರ್ಲಕ್ಷಿಸಿದ್ದರು.
ಆದರೆ ಪಡೀಲ್ರ ಸದಸ್ಯತ್ವ ನಿರಾಕರಣೆಗೆ ಈಗ
ಕಾಂಗ್ರೆಸಿಗರು ಕೊಡುತ್ತಿರುವ ಕಾರಣದಿಂದಾಗಿ
ಅವರೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಮಗೆ ಸದಸ್ಯತ್ವ ಕೊಡುತ್ತಿದ್ದರು, ಆದರೆ
ನೀವು ಬಿಜೆಪಿ ನಾಯಕರೊಂದಿಗೆ
ಗುರುತಿಸಿಕೊಂಡಿದ್ದೀರಿ, ನೀವು ಬಿಜೆಪಿಯ
ಪ್ರಮುಖ ನಾಯಕನ ಮದುವೆಗೆ ಹೋಗಿದ್ದೀರಿ
ಎಂದು ಕಾಂಗ್ರೆಸಿಗರು ಸಬೂಬು ನೀಡಿದ್ದಾರೆ.
ಪಡೀಲ್ ಹೇಳುವುದು,
ನಾವು ಕಲಾವಿದರು ಯಾವುದೇ ಜಾತಿ,
ಸಮುದಾಯಕ್ಕೆ ಸೀಮಿತರಾದವರಲ್ಲ.
ಯಾವುದೇ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ.
ಆದರೆ ಎಲ್ಲ ಜಾತಿ ಸಮುದಾಯದವರೂ,
ಪಕ್ಷಗಳವರೂ ನಮ್ಮ ಒಡನಾಟದಲ್ಲಿ
ಇರುತ್ತಾರೆ. ಕಾಂಗ್ರೆಸಿಗರೇ ಪೆÇೀನ್ ಮಾಡಿ
ನಮ್ಮ ಬಯೋಡಾಟ ಕೇಳಿದ್ದಾರೆ ಎಂದರೆ
ಅವರು ನಮ್ಮ ಪ್ರತಿಭೆಯನ್ನು ಗುರುತಿಸಿದ್ದಾರೆ
ಎಂದು ಕೊಂಡಿದ್ದೆವು. ಆದರೆ ಅವರು ತಮ್ಮ
ರಾಜಕೀಯ ಉದ್ದೇಶಕ್ಕೆ
ನಮ್ಮನ್ನೂ ಬಲಿಪಶು ಮಾಡಿದ್ದಾರೆ. ಇದು ನನಗೆ
ಮಾತ್ರವಲ್ಲ ತುಳು ಕಲಾವಿದರಿಗೆ ಮಾಡಿದ
ಅವಮಾನ. ನನಗೆ ತುಳು ಸಾಹಿತ್ಯ ಅಕಾಡಮಿಯ
ಸದಸ್ಯತ್ವ ಕೊಡದೆ ಇದ್ದುದಕ್ಕೆ ಬೇಸರ ಇಲ್ಲ.
ಬದಲಿಗೆ ಸದಸ್ಯತ್ವ ನಿರಾಕರಿಸಲು ಕೊಟ್ಟ
ರಾಜಕೀಯ ಕಾರಣದ ಬಗ್ಗೆ ಆಕ್ರೋಶ ಇದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವೆ
ಉಮಾಶ್ರೀ ಹಾಗೂ ನಾನು ಗಡಿನಾಡು ಅಭಿವೃದ್ಧಿಗಾಗಿ
ಹೋರಾಟ ನಡೆಸಿದವರು. ಒಟ್ಟಿಗೆ ಕೆಲಸ
ಮಾಡಿರುವ ಇಂತಹವರು ರಾಜಕೀಯ ಕಾರಣಕ್ಕಾಗಿ
ನನ್ನ ಸದಸ್ಯತ್ವ ನಿರಾಕರಿಸಿದ್ದಾರೆ
ಎಂಬುದು ಅತ್ಯಂತ ಬೇಸರದ ವಿಷಯ
ಎನ್ನುತ್ತಾರೆ ನವೀನ್ ಪಡೀಲ್.
Kaushi js shetty (hindu rockss)
No comments:
Post a Comment