Friday, April 18, 2014

"ಬ್ರಹ್ಮಾಂಡ ಜೋತಿಷ್ಯ ನಿಜವಾಗುತ್ತ"

ಬ್ರಹ್ಮಾಂಡ ಗೂರುಜಿ ಭವಿಷ್ಯ:::ಹಾವೇರಿಯಲ್ಲಿ ಬಿಜೆಪಿಯ ಶಿವಕುಮಾರ್ ಉದಾಸಿಗೆ ಗೆಲುವು, ಕಾಂಗ್ರೆಸ್ಸಿನ ಸಲೀಂ ಅಹಮದ್ ಅವರಿಗೆ ಸೋಲು. ದಾವಣಗೆರೆಯಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ಪೈಪೋಟಿಯಲ್ಲಿ ಬಿಜೆಪಿಯ ಜಿ ಎಂ ಸಿದ್ದೇಶಿಗೆ ಗೆಲುವು, ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಸೋಲು.
ಹುಬ್ಬಳ್ಳಿ ಧಾರವಾಡದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿಗೆ ಗೆಲುವು, ಕಾಂಗ್ರೆಸ್ಸಿನ ವಿನಯ್ ಕುಲ್ಕರ್ಣಿಗೆ ಸೋಲು. ಬೆಳಗಾವಿಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಮತ್ತು ಕಾಂಗ್ರೆಸ್ಸಿನ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ತೀವ್ರ ಪೈಪೋಟಿ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ಜಯ ಸಾಧ್ಯತೆ. 
ಗುಲ್ಬರ್ಗದಲ್ಲಿ ಕಾಂಗ್ರೆಸ್ಸಿನ ಮಲ್ಲಿಕಾರ್ಜುನ ಖರ್ಗೆಗೆ ಬಿಜೆಪಿಯ ರೇವೂ ನಾಯಕ್ ಬೆಳಮಗಿ ವಿರುದ್ದ ಕೂದಲೆಳೆಯ ಜಯ. ಬೀದರ್ ನಲ್ಲಿ ಬಿಜೆಪಿಯ ಭಗವಂತ ಖೂಬಗೆ ಗೆಲುವು, ಕಾಂಗ್ರೆಸ್ಸಿನ ಧರಂಸಿಂಗ್ ಗೆ ಸೋಲು.
ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಎನ್ ವೈ ಹನುಮಂತಪ್ಪಗೆ ಬಿಜೆಪಿಯ ಶ್ರೀರಾಮುಲು ವಿರುದ್ದ ಗೆಲುವು. ಕೋಲಾರದಲ್ಲಿ ಕಾಂಗ್ರೆಸ್ಸಿನ ಮುನಿಯಪ್ಪ ಮೂರನೇ ಸ್ಥಾನಕ್ಕೆ. ಬಿಜೆಪಿಯ ಎಂ ನಾರಾಯಣಸ್ವಾಮಿಗೆ ಜೆಡಿಎಸ್ ಅಭ್ಯರ್ಥಿ ವಿರುದ್ದ ಗೆಲುವು.
ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಮೂರನೇ ಸ್ಥಾನಕ್ಕೆ. ಬಿಜೆಪಿಯ ಬಚ್ಚೇಗೌಡ ಅವರಿಗೆ ಕಾಂಗ್ರೆಸ್ಸಿನ ವೀರಪ್ಪ ಮೊಯ್ಲಿ ವಿರುದ್ದ ಗೆಲುವು. ಮಂಡ್ಯದಲ್ಲಿ ಕಾಂಗ್ರೆಸ್ಸಿನ ರಮ್ಯಾಗೆ ಜೆಡಿಎಸ್ ಪಕ್ಷದ ಪುಟ್ಟರಾಜು ವಿರುದ್ದ ಅತಿ ಪ್ರಯಾಸದ ಗೆಲುವು. 
ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರಿಗೆ ಜೆಡಿಎಸ್ ಪಕ್ಷದ ಗೀತಾ ಶಿವರಾಜ್ ಕುಮಾರ್ ವಿರುದ್ದ ಗೆಲುವು. ತುಮಕೂರಿನಲ್ಲಿ ಬಿಜೆಪಿಯ ಬಸವರಾಜ್ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕೃಷ್ಣಪ್ಪ ವಿರುದ್ದ ಗೆಲುವು. ಕಾಂಗ್ರೆಸ್ಸಿನ ಮುದ್ದು ಹನುಮೇಗೌಡ ಮೂರನೇ ಸ್ಥಾನದಲ್ಲಿ. 
ಹಾಸನದಲ್ಲಿ ಜೆಡಿಎಸ್ ಪಕ್ಷದ ದೇವೇಗೌಡ ಅವರಿಗೆ ಕಾಂಗ್ರೆಸ್ಸಿನ ಮಂಜು ವಿರುದ್ದ ಸುಲಭದ ಗೆಲುವು. ಮೈಸೂರಿನಲ್ಲಿ ಕಾಂಗ್ರೆಸ್ಸಿನ ಎಚ್ ವಿಶ್ವನಾಥ್ ಅವರಿಗೆ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ದ ನಿರಾಯಾಸ ಗೆಲುವು.
ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ಸಿನ ನಂದನ್ ನಿಲೇಕಣಿಗೆ ಬಿಜೆಪಿಯ ಅನಂತ್ ಕುಮಾರ್ ವಿರುದ್ದ ಪ್ರಯಾಸದ ಗೆಲುವು. ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಸದಾನಂದ ಗೌಡ ಅವರಿಗೆ ಕಾಂಗ್ರೆಸ್ಸಿನ ನಾರಾಯಣಸ್ವಾಮಿ ವಿರುದ್ದ ಗೆಲುವು.
ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಮುಗ್ಗರಿಸಲಿದ್ದಾರೆ. ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆ ವಿಜಯದ ನಗು ಬೀರಲಿದ್ದಾರೆ. ದಕ್ಷಿಣಕನ್ನಡ ಕ್ಷೇತ್ರದಲ್ಲಿ ಹಿರಿಯ ರಾಜಕರಾಣಿ, ಮಹಾನ್ ದೈವಭಕ್ತ ಜನಾರ್ಧನ ಪೂಜಾರಿ ಜಯಭೇರಿ ಭಾರಿಸಲಿದ್ದಾರೆ. ನಳಿನ್ ಕುಮಾರ್ ಕಟೀಲ್ ಇಲ್ಲಿ ಕ್ಲೋಸ್ ಫಿನಿಷ್ ನಲ್ಲಿ ಸೋಲಲಿದ್ದಾರೆ.

ಬ್ರಹ್ಮಾಂಡ ಗೂರುಜಿ

by;- #kiran #tuluva

No comments:

Post a Comment