By:-#kaushi js shetty (hindu rockss)
ನರೇಂದ್ರ ಮೋದಿ ತನ್ನ ಪತ್ನಿಯಿಂದ
ದೂರವಾಗಿದ್ದು ಹೇಗೆ? ಯಾಕೆ? ಪತಿ ಬಗ್ಗೆ
ಜಶೋದಾಬೆನ್ ಏನು ಹೇಳುತ್ತಾರೆ? ಈ ಬಗ್ಗೆ
ಒಂದಷ್ಟು ವಿವರಗಳು ಇಲ್ಲಿವೆ...
ಗುಜರಾತ್'ನ ಮೆಹ್ಸಾನಾ ಜಿಲ್ಲೆಯಲ್ಲಿ 1950ರ
ಸೆಪ್ಟಂಬರ್ 17ರಂದು ಜನಿಸಿದ ನರೇಂದ್ರ ಮೋದಿ
ಚಿಕ್ಕಂದಿನಿಂದಲೇ ಕಡುಕಷ್ಟದಲ್ಲಿ
ಬೆಳೆದವರಾಗಿದ್ದರು. ರೇಲ್ವೆ ಸ್ಟೇಷನ್'ಗಳಲ್ಲಿ
ತನ್ನ ತಂದೆಯ ಜೊತೆ
ಟೀ ಮಾರಿಕೊಂಡು ಬೆಳೆದಿದ್ದರು. ಮೋದಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ
ಕಾರ್ಯಕರ್ತರಾಗಿ ಅದಾಗಲೇ ಗುರುತಿಸಿಕೊಂಡಿದ್
ದರು. ಆದರೆ, ಅವರ ಘಾಂಚಿ ಜಾತಿಯಲ್ಲಿ
ಆಗೆಲ್ಲಾ ಕಿರಿಯ ವಯಸ್ಸಿಗೇ ಮದುವೆ
ಮಾಡಿಬಿಡುತ್ತಿದ್ದರಿಂದ ಮೋದಿ
17ನೇ ವಯಸ್ಸಿಗೇ ಮದುವೆ ಫಿಕ್ಸ್ ಆಗಿತ್ತು. ಆಗ
ಅವರ ಪತ್ನಿ ಜಶೋದಾಬೆನ್'ಗೂ 17
ವರ್ಷವಾಗಿತ್ತು.
ಹೆಚ್ಚು ಓದದ ಪತ್ನಿ ಜಶೋದಾಬೆನ್ ತನ್ನ
ಶಿಕ್ಷಣವನ್ನ ಪೂರ್ಣಗೊಳಿಸಬೇಕೆಂಬುದು ಮೋದಿ
ಆಸೆಯಾಗಿತ್ತು. ಹೀಗಾಗಿ ಆಕೆಯನ್ನ ತವರಿಗೆ
ಕಳುಹಿಸಿದರು.
ಆರೆಸ್ಸೆಸ್ ಪ್ರಭಾವ...
ಮೋದಿಯವರು ತಮ್ಮ ಹೆಂಡತಿಯಿಂದ
ದೂರವಾಗಲು ಮತ್ತೊಂದು ಕಾರಣವಿತ್ತು.
ಅವರು ಕಾರ್ಯಕರ್ತರಾಗಿದ್ದ ಆರೆಸ್ಸೆಸ್'ನಲ್ಲಿ
ಮೇಲಿನ ಹಂತಕ್ಕೇರಬೇಕೆಂದರೆ ಸಕಲವನ್ನ
ತ್ಯಾಗ ಮಾಡಿ ತಮ್ಮ ಜೀವನವನ್ನ ಸಂಘದ
ಚಟುವಟಿಕೆಗಳಿಗೆ ಮುಡಿಪಾಗಿಡಬೇಕಿತ್ತು.
ಪತ್ನಿಯೊಂದಿಗೆ ಇದ್ದರೆ ರಾಸ್ವ ಸಂಘದಲ್ಲಿ
ಬೆಳೆಯಲು ಕಷ್ಟಸಾಧ್ಯ ಎಂದರಿತ ಮೋದಿ ಮತ್ತೆ
ತನ್ನ ಪತ್ನಿಯ ಮೇಲೆ ಆಸಕ್ತಿ ತೋರಲಿಲ್ಲ.
ಆದರೆ, ಕೆಲವರು ಹೇಳುವ ಪ್ರಕಾರ, ಮೋದಿ
ಆರೆಸ್ಸೆಸ್ ಪ್ರಚಾರಕರಾಗಿ ಕಾಲಿಗೆ ಗಾಲಿ
ಕಟ್ಟಿಕೊಂಡವರಂತೆ ದೇಶಾದ್ಯಂತ ಪ್ರವಾಸ
ಮಾಡಬೇಕಿದ್ದರಿಂದ ಪತ್ನಿಯಿಂದ
ದೂರವಾದರಂತೆ.
ಪತಿ ಸೇರಲು ಪತ್ನಿಯ ಪ್ರಯತ್ನ
ಇತ್ತ, ಜಶೋದಾಬೆನ್ನ ತನ್ನ ಪತಿಯ ಆಸೆಯಂತೆ
ಶಿಕ್ಷಣ ಪೂರೈಸಿ ಪ್ರಾಥಮಿಕ
ಶಾಲಾ ಶಿಕ್ಷಕಿಯೂ ಆಗಿದ್ದರು. ಆದರೆ, ಆಕೆಯ
ದುರದೃಷ್ಟಕ್ಕೆ ಪತಿಯನ್ನ ಮೆಚ್ಚಿಸಿ ಮತ್ತೆ
ಒಂದುಗೂಡಲು ಸಾಧ್ಯವಾಗಲಿಲ್ಲ.
ಜಶೋದಾ ಅನೇಕ ಬಾರಿ ವಾದ್ನಾನಗರದಲ್ಲಿರುವ
ತನ್ನ ಪತಿ ಮೋದಿಯವರ ಮನೆಗೆ
ಹೋಗಿದ್ದರಾದರೂ ಏನೂ ಪ್ರಯೋಜನವಾಗಿರಲಿಲ
್ಲ. ಯಾಕೆಂದರೆ, ಮೋದಿ ತನ್ನ ಮನೆಗೆ
ಬರುವುದೇ ತೀರಾ ಅಪರೂಪವಾಗಿತ್ತು.
ಅವರು ಸದಾ ಆರೆಸ್ಸೆಸ್
ಶಾಖೆಗಳಲ್ಲೇ ಕಾಲಕಳೆಯುತ್ತಿದ್ದರಂತೆ.
ಹೀಗಾಗಿ, ಜಶೋದಾಬೆನ್ ದಿನಕಳೆದಂತೆ ತನ್ನ
ಪತಿಯೊಂದು ಒಂದುಗೂಡುವ ಆಸೆಯನ್ನ
ಹೆಚ್ಚೂಕಡಿಮೆ ಕೈಬಿಟ್ಟರು.
ಇದೀಗ, ಜನಪ್ರಿಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ
ಬಳಿಕ ಜಶೋದಾಬೆನ್ ನಿವೃತ್ತರಾಗಿದ್ದಾರೆ;
ಸುಮಾರು 14 ಸಾವಿರ ಮಾಸಿಕ ಪಿಂಚಣಿ
ಪಡೆದು ತನ್ನ ಅಣ್ಣನ ಮನೆಯಲ್ಲಿ
ಬದುಕು ಸವೆಸುತ್ತಿದ್ದಾರೆ.
ಪತಿ ಮುಂದೊಂದು ದಿನ ಪ್ರಧಾನಿಯಾಗಿ ಈ
ದೇಶವನ್ನ ಆಳುತ್ತಾರೆ ಎಂಬ ಭರವಸೆ ಆಕೆಗಿದ
No comments:
Post a Comment