ಮನೆಮಂದಿ ನಿದ್ದೆಗೆ ಜಾರಿದ್ದ
ಹೊತ್ತಲ್ಲಿ ಟಾಟಾ ಸುಮೋದಲ್ಲಿ ಬಂದ
ದುಷ್ಕರ್ಮಿಗಳ ತಂಡವೊಂದು ಹಟ್ಟಿಗೆ ನುಗ್ಗಿ
ನಾಲ್ಕು ಹಸುಗಳನ್ನು ಕದ್ದು ಪರಾರಿಯಾದ
ಘಟನೆ ಕುಪ್ಪೆಪದವಿನ ವಕೀಲ ಭಾಸ್ಕರ್
ಕಟ್ಟೆಮಾರ್ ಎಂಬವರ ಮನೆಯಲ್ಲಿ
ಇಂದು ನಸುಕಿನ ಜಾವ ನಡೆದಿದೆ. ವಕೀಲ
ಭಾಸ್ಕರ ಅವರ ಮನೆಯಲ್ಲಿ ಪುನೀತ್ಕುಮಾರ್
ಎಂಬವರು ವಾಸಿಸುತ್ತಿದ್ದು ಹಟ್ಟಿಯಲ್ಲಿ
ಸದ್ದುಕೇಳಿ ಕೂಡಲೇ ಎಚ್ಚರವಾದರು. ಆಗ
ಅವರೆದುರೇ ದುಷ್ಕರ್ಮಿಗಳು ಹಸುಗಳನ್ನು
ಯಾತನಾಮಯವಾಗಿ ಕುಳ್ಳಿರಿಸಿ ಅಲ್ಲಿಂದ
ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ತಕ್ಷಣ ಪುನೀತ್ ಇತರರಿಗೆ ಸುದ್ದಿ ಮುಟ್ಟಿಸಿ
ಟಾಟಾ ಸುಮೋವನ್ನು ಬೆನ್ನತ್ತಿ
ಹೋದರೂ ಅದು ಮೂಡಬಿದ್ರೆ ಕಡೆಗೆ
ಪರಾರಿಯಾಗಿದೆ
ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ
ಮೂಡಬಿದ್ರೆ ಠಾಣೆಗೆ ಕರೆ ಮಾಡಿ ತಿಳಿಸಿದರೆ
ಅವರು ಈ ಘಟನೆಯ ಬಗ್ಗೆ ನಿರ್ಲಕ್ಷ್ಯ
ತಾಳಿದ್ದಷ್ಟೇ ಅಲ್ಲದೆ
ದುಷ್ಕರ್ಮಿಗಳನ್ನು ಹಿಡಿಯಲು ಯತ್ನಿಸಲಿಲ್ಲ
ಎಂದು ಆರೋಪಿಸಿದ್ದಾರೆ. ಅಲ್ಲದೆ
ಸ್ಥಳೀಯ ಬಜ್ಪೆ ಠಾಣೆ
ಹಾಗೂ ಜಿಲ್ಲಾ ಕಂಟ್ರೋಲ್ ರೂಂಗೆ
ಹಲವು ಬಾರಿ ಕರೆ ಮಾಡಿ
ತಿಳಿಸಿದರೂ ಪೊಲೀಸರು ಯಾವುದೇ ಸಕಾಲಿಕ
ಕ್ರಮ ಕೈಗೊಂಡಿಲ್ಲ
ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳವಿಗೀಡಾದ
ಹಸುಗಳು ಹಾಲು ಕೊಡುತ್ತಿದ್ದು ಒಂದೊಂದು
ಹಸುವಿನ ಮೌಲ್ಯ ರೂ. 40 ಸಾವಿರ
ಎಂದು ಅಂದಾಜಿಸಲಾಗಿದೆ.
ಸ್ಥಳೀಯರಿಂದ ಪ್ರತಿಭಟನೆ: ಪೊಲೀಸರ
ನಿರ್ಲಕ್ಷ್ಯವನ್ನು ಖಂಡಿಸಿ
ಕುಪ್ಪೆಪದವು ಸ್ಥಳೀಯರು ಬಂದ್
ಮಾಡಲು ಮುಂದಾಗಿದ್ದಾರೆ. ಸ್ಥಳಕ್ಕೆ ಎಸಿಪಿ
ರವಿಯವರು ಸ್ಥಳಕ್ಕಾಗಮಿಸಿ ಪರಿಶೀಲಿಸಿ
ಕಳವಿಗೀಡಾದ ಹಸುಗಳನ್ನು ಸಂಜೆಯೊಳಗಡೆ
ಹಿಡಿದು ಮನೆಯವರಿಗೊಪ್ಪಿಸಬೇಕು,
ಇಲ್ಲದಿದ್ದರೆ
ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ
ಎಂದು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ
ಮಾಹಿತಿ ನೀಡಿದ್ದರೂ ಅವರು ನಿರ್ಲಕ್ಷ್ಯ
ತಾಳಿದ ಹಿನ್ನೆಲೆ ದುಷ್ಕರ್ಮಿಗಳೊಂದಿಗೆ
ಪೊಲೀಸರು ಕೂಡಾ ಶಾಮೀಲಾಗಿದ್ದಾರೆ,
ಅವರಿಗೆ
ತಿಂಗಳು ತಿಂಗಳು ಹಫ್ತಾ ತಲುಪುತ್ತದೆ ಎಂಬ
ಗಂಭೀರ ಆರೋಪವನ್ನು ಸಹ
ಅವರು ಮಾಡಿದ್ದಾರೆ.
aDmiN Kaushi Js Shetty
Wednesday, June 18, 2014
"ಮನೆಯವರೇದುರೆ ದನ ಕಳ್ಳತನ "
Subscribe to:
Post Comments (Atom)
No comments:
Post a Comment