ಜೈ ತುಳು ನಾಡು.......
ಹೆಗ್ಗಡೆ ಕುಟುಂಬದವರು ಕಾನತ್ತೂರಿಗೆ ಬರಲಿ: ತಿಮರೋಡಿ ಸವಾಲು........
ಬೆಳ್ತಂಗಡಿ: ನನಗೆ ದೈವ-ದೇವರುಗಳ ಬಗ್ಗೆ ನಂಬಿಕೆ ಇದೆ, ನಾವು ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಹರ್ಷೇಂದ್ರ, ವೀರೇಂದ್ರ ಹೆಗ್ಗಡೆ ವಿರುದ್ದವಲ್ಲ. ಧರ್ಮಸ್ಥಳದ ವಿರುದ್ಧವೂ ಅಲ್ಲ, ಬೆಳ್ತಂಗಡಿ ತಾಲೂಕಿನ 80 ಗ್ರಾಮಗಳಲ್ಲಿ ಆಗದ ಅನ್ಯಾಯ, ಅನಾಚಾರ, ಅತ್ಯಾಚಾರ, ಧರ್ಮ ಸ್ಥಳ ಒಂದೇ ಗ್ರಾಮದಲ್ಲಿ ಯಾಕೆ ಆಗುತ್ತಿದೆ? ದೈವ - ದೇವತೆಗೆ ಹೂ ನೀರು ನೀಡುವ ಜನರು ನಾವು, ನಾವು ಯಾರಿಗೂ ಅನ್ಯಾಯ ಮಾಡಿಲ್ಲ, ಅನ್ಯಾಯವಾದದ್ದು ಧರ್ಮಸ್ಥಳ ಗ್ರಾಮದಲ್ಲಿ. ಅದಕ್ಕಾಗಿ ಧರ್ಮಸ್ಥಳ ಕುಟುಂ ಬಸ್ಥರೇ ಕಾನತ್ತೂರಿಗೆ ಬಂದು ಅಲ್ಲಿನ ಬೆಳ ವಣಿಗೆಯ ಬಗ್ಗೆ ಸತ್ಯಪ್ರಮಾಣ ಮಾಡಲಿ ಎಂದು ಪ್ರಜಾಪ್ರಭುತ್ವ ವೇದಿಕೆ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಪ್ರಜಾಪ್ರಭುತ್ವ ವೇದಿಕೆ ಮಾಲಾಡಿ-ಮಡಂತ್ಯಾರು ಘಟಕದ ವತಿಯಿಂದ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಸುಪ್ರಿಂ ಕೋರ್ಟ್‍ನ ಮೇಲ್ವಿಚಾರಣೆಯಲ್ಲಿಯೇ ಸಿಬಿಐ ತನಿಖೆಗೊಳಪಡಿಸಬೇಕೆಂದು ನಡೆಸಿದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಂಜೊಟ್ಟಿ ಗಲಭೆಯಲ್ಲಿಯೇ ನನ್ನನ್ನು ಜೈಲಿಗೆ ಹಾಕುವ ಷಡ್ಯಂತ್ರ್ಯ ನಡೆದಿತ್ತು. ನಿಡ್ಲೆಯಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಧರ್ಮಸ್ಥಳದಿಂದ ಗೂಂಡಾ ಗಳನ್ನು ಕಳುಹಿಸುತ್ತಾರೆ. ಅಳಕೆಯಲ್ಲಿ ನಡೆದ ಪ್ರತಿಭಟನೆಗೂ ಬೆಂಗಳೂರಿನ ರಿಜಿಸ್ಟರ್ ನಂಬರ್ ಹೊಂದಿರುವ ವಾಹನದಲ್ಲಿ ಧರ್ಮಸ್ಥಳದ ಪರವಾದ ಜನರು ಬರುತ್ತಾರೆ, ಕಾಯರ್ತಡ್ಕದಲ್ಲಿ ನಡೆದ ಸಭೆಗೆ ಗೋವಾ ಮೂಲದ ಕಾರಿನಲ್ಲಿ ಧರ್ಮಸ್ಥಳದಿಂದ ಗೂಂಡಾಗಳನ್ನು ಕಳುಹಿಸುತ್ತಾರೆ. ಮಡಂ ತ್ಯಾರಿನ ಪ್ರತಿಭಟನಾ ಸಭೆಗೆ ಜನರು ಬಾರದಂತೆ ಎರಡೆರಡು ಕಾರ್ಯಕ್ರಮಗಳನ್ನು ಇಟ್ಟಿದ್ದಾರೆ, ಧರ್ಮಸ್ಥಳದ ಒಕ್ಕೂಟದ ಸಭೆ ನಡೆಸುತ್ತಾರೆ, ಪಾರೆಂಕಿ ದೇವಸ್ಥಾನದಲ್ಲಿ ಇನ್ನೊಂದು ಕಾರ್ಯಕ್ರಮ ಇಟ್ಟಿದ್ದಾರೆ. ಬಳ್ಳಮಂಜದಲ್ಲಿ ಇವತ್ತೇ ಯುವಜನ ಮೇಳವನ್ನು ಆಯೋಜಿಸಲಾಗಿದೆ. ಇದೆಲ್ಲ ಸಭೆಗೆ ಅಡ್ಡಿ ಪಡಿಸುವ ಷಡ್ಯಂತ್ರ್ಯಗಳು ಎಂದರು.
ಒಬ್ಬ ಮಹೇಶ ಹತ್ಯೆಯಾದರೆ ಜಿಲ್ಲೆಯಾದ್ಯಂತ ಸಾವಿರಾರು ಮಹೇಶ ಹುಟ್ಟಿಬರುತ್ತಾರೆ. ಆವಾಗ ದ.ಕ. ಜಿಲ್ಲೆಯಾದ್ಯಂತ ದೊಡ್ಡ ಅನಾಹುತವೇ ಸಂಭವಿಸಬಹುದು. ನಮ್ಮ ಸಭೆಗಳನ್ನು ಹತ್ತಿಕ್ಕಲು, ಪೊಲೀಸ್ ಇಲಾಖೆ, ಜಿಲ್ಲಾಡಳಿತ, ತಹಶೀಲ್ದಾರರು ಶ್ರಮಿಸುತ್ತಾರೆ, ನನ್ನ ಗನ್‍ಮ್ಯಾನ್ ತೆಗೆದು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದೀರಿ. ನಾವು ಆತ್ಮಾಹುತಿ ಮಾಡಲು ತಯಾರಿದ್ದೇವೆ. ಜೈಲ್‍ಭರೋ ಚಳುವಳಿ ನಡೆಸಲು ಸಿದ್ಧರಿದ್ದೇವೆ ಎಂದರು.
ಎರಡನೇ ಹಂತದ ಚಳುವಳಿಗೆ ಸಿದ್ದರಾಗಿ: ಕೇಮಾರುಶ್ರೀ
ಒಂದುವೇಳೆ ಸಿಬಿಐ ತನಿಖೆ ವಿಳಂಬವಾದಲ್ಲಿ ಎರಡನೇ ಹಂತದ ಚಳವಳಿಯನ್ನು ಸದ್ಯದಲ್ಲೇ ನಡೆಸಲು ತಯಾರಿದ್ದೇವೆ. ಅದಕ್ಕಾಗಿ ಈಗಿಂದಲೇ ಸಿದ್ದತೆ ನಡೆಸುತ್ತಿದ್ದೇವೆ. ನನ್ನನ್ನು ಕಳ್ಳ, ಡೋಂಗಿ ಎಂದು ಕರೆದರೂ ಚಿಂತೆ ಇಲ್ಲ. ಯಾರು ಹತ್ಯೆ ಮಾಡಿದ್ದಾರೆ ಅವರನ್ನು ಹಿಡಿದು ಜೈಲಿಗೆ ಹಾಕಿ ಎಂದು ಹೇಳಿದ್ದೇನೆ, ನಾನು ಕಾವಿ ಹಾಕಿದ್ದು ಆತ್ಮ ಸಂಸ್ಕಾರಕ್ಕೆ ಎಂದರು.
ಸಭೆಯನ್ನು ಉದ್ದೇಶಿಸಿ ಅತ್ರಾಡಿ ಅಮೃತಾ ಶೆಟ್ಟಿ ಮಾತನಾಡಿ, ಧೀರಜ್ ಕೆಲ್ಲಾ, ಉದಯ್ ಜೈನ್, ಮಲ್ಲಿಕ್ ಜೈನ್ ಎಂಬ ಮೂವರು ಆಪಾದಿತರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಮುಂದೆ, ಅಣ್ಣಪ್ಪ ಸ್ವಾಮಿಯ ಮುಂದೆ, ನೆಲ್ಯಾಡಿಬೀಡಿನಲ್ಲಿ ಪ್ರಮಾಣ ಮಾಡುವಾಗ ನಮ್ಮನ್ನು ಕರೆಯದೆ ಈಗ ಕಾನತ್ತೂರಿಗೆ ಮಾತ್ರ ನಮ್ಮನ್ನು ಕರೆಯುತ್ತಿದ್ದಾರೆ. ಅದಕ್ಕಾಗಿ ಕಾನತ್ತೂರಿನಿಂದ ನನಗೆ ಬಂದ ನೋಟೀಸನ್ನು ನಾನು ಸ್ವೀಕರಿಸದೆ ವಾಪಸು ಕಳುಹಿಸಿದ್ದೇನೆ. ಧರ್ಮಸ್ಥಳದಲ್ಲಿ ಅಣ್ಣಪ್ಪ ಸ್ವಾಮಿಯ ಕಾರ್ಣಿಕ ಇಲ್ಲದಿದ್ದರೆ ಸಾರ್ವಜನಿಕವಾಗಿ ಹೇಳಲಿ, ಆಗ ನಾನು ಕಾನತ್ತೂರಿಗೆ ಹೋಗುತ್ತೇನೆ ಎಂದರು.
ಸದಾನಂದ ಗೌಡರೇ ಮೊದಲ ಆರೋಪಿ: ಸಾಮಾಜಿಕ ಕಾಯಕರ್ತ ಜಯರಾಂ ಬಂಗಾಡಿ ಮಾತನಾಡಿ, ಸೌಜನ್ಯ ಪ್ರಕರಣದ ಸಾಕ್ಷಿ ನಾಶ ಪ್ರಕರಣದಲ್ಲಿ ಅಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ನಮ್ಮ ಮಣ್ಣಿನ ಮಗ, ಗೌಡ ಸಮಾಜದ ಮುಖಂಡ ಸದಾನಂದ ಗೌಡರೇ ಮೊದಲ ಆರೋಪಿ ಎಂದರು. ಎರಡನೇ ಆರೋಪಿ ಪೊಲೀಸರು ಎಂದರು.
ಸೌಜನ್ಯ ಪ್ರಕರಣ ಮುಗಿಸಲು ಚಂದನ್ ಕಾಮತ್ ಡೀಲ್‍ಗೆ ಮುಂದಾಗಿದ್ದರು
ಲಾೈಲ ಪ್ರತಿಭಟನೆಯಲ್ಲಿ ತಿಮರೋಡಿ ಗಂಭೀರ ಆರೋಪ
ಧರ್ಮಸ್ಥಳ ಪಾಂಗಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಹೇಗಾದರೂ ಮಾಡಿ ಮುಚ್ಚಿಹಾಕೋಣ, ಸತ್ತವಳು ಇನ್ನು ಬದುಕಿ ಬರುವುದಿಲ್ಲ. ಸುಮ್ಮನೆ ಯಾಕೆ ಹೋರಾಟಗಳನ್ನು ನಡೆಸಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತೀರಿ, ಆದದ್ದೆಲ್ಲಾ ಆಗಿ ಹೋಗಿದೆ. ಇನ್ನು ಏನು ಮಾಡಲು ಆಗಲ್ಲ. ನೀವು ಮನಸು ಮಾಡಿದರೆ ಎಲ್ಲವನ್ನು ಮುಚ್ಚಿಹಾಕಬಹುದು. ಅದಕ್ಕಾಗಿ ನಿಮಗೆಷ್ಟು ಹಣ ಕೊಡಬೇಕು’ ಎಂದು ಉದ್ಯಮಿ ಚಂದನ್ ಕಾಮತ್ ನೇರವಾಗಿ ನನ್ನ ಮೊಬೈಲ್‍ಗೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ಪ್ರಜಾಪ್ರಭುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಗಂಭೀರ ಆರೋಪವನ್ನು ಮಾಡಿದ್ದಾರೆ.
ನಿನ್ನೆ ಸಂಜೆ ಪ್ರಜಾಪ್ರಭುತ್ವ ವೇದಿಕೆ ಲಾೈಲ ವಲಯ ಇದರ ನೇತೃತ್ವದಲ್ಲಿ ಆರೋಪಿಗಳ ಬಹಿರಂಗ ಮಂಪರು ಪರೀಕ್ಷೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಚಂದನ್ ಕಾಮತ್‍ರವರ ಲಾಡ್ಜ್‍ನಲ್ಲಿ ಎರಡೆರಡು ಸಲ ಅತ್ಯಾಚಾರ ನಡೆಸಿ ಸಿಕ್ಕಿಬಿದ್ದ ಧೀರಜ್ ಕೆಲ್ಲ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸುವುದು ಇಲ್ಲ. ಆದರೆ ತಂದೆ-ತಾಯಿಯ ಒಪ್ಪಿಗೆಯಿಂದ ಸೌಜನ್ಯಳ ಭಾವಚಿತ್ರ ಅಂಟಿಸಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕಲಾಗುತ್ತಿದೆ. ಇದು ಬೆಳ್ತಂಗಡಿ ಪೊಲೀಸರ ಕರಾಮತ್ತು ಎಂದರು. 19ಕ್ಕೆ ನಿಗದಿಯಾಗಿದ್ದ ಕಾನತ್ತೂರು ಪ್ರಮಾಣವನ್ನು ದಿಢೀರನೇ ರದ್ದುಗೊಳಿಸಲಾಗಿದೆ. ಈ ಬಗ್ಗೆ ನಾನು ಕಾನತ್ತೂರಿನ ಸಂಬಂಧಪಟ್ಟವರಿಗೆ ಪ್ರಶ್ನಿಸಿದಾಗ ಅವರು ಕಾನತ್ತೂರಿನಲ್ಲಿ ಜಾತ್ರೆ ಇದೆ ಎಂದು ಸುಳ್ಳು ಹೇಳಿದ್ದಾರೆ. ಕಾನತ್ತೂರಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಜಾತ್ರೆ ಆಗಿದೆ. ಕಾನತ್ತೂರಿನಲ್ಲಿ ವರ್ಷದಲ್ಲಿ ಎರಡೆರಡು ಸಲ ಜಾತ್ರೆಯಾಗುತ್ತದೆಯೋ? ಕಾನತ್ತೂರನ್ನು ಧರ್ಮಸ್ಥಳದ ಮಾದರಿ ಮಾಡಲು ಹೊರಟಿದ್ದಾರೆ. ಕಾನತ್ತೂರಿನಲ್ಲೂ ಸತ್ಯ ನಡೆಯುತ್ತಾ? ಎಂದು ನಾವು ಪ್ರಶ್ನಿಸಬೇಕಾಗಿದೆ ಎಂದರು.
ಕೃಪೆ : -#kaushi #js #shetty (#hindu #rockss)
No comments:
Post a Comment