www.kaushijstulunadu.blogspot.com
ಜೈ ತುಳು ನಾಡು ......
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ನಿನ್ನೆ ಸಂಕ್ರಾಂತಿ ಹಿನ್ನೆಲೆಯಲ್ಲಿ ಭೇಟಿಯಾದರು.
ಜನವರಿ ೨೪ರಂದು ಬಿಡುಗಡೆಯಾಗಲಿರುವ ತಮ್ಮ ಹೊಸ ಸಿನಿಮಾ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅಹಮದಾಬಾದ್‌ಗೆ ಬಂದಿದ್ದರು. ಭೇಟಿ ಸಂದರ್ಭದಲ್ಲಿ ಖಾನ್ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಅಹಮಬಾದ್‌ನಲ್ಲಿ ನಡೆದಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮೋದಿ ಅವರೊಂದಿಗೆ ನಟ ಸಲ್ಮಾನ ಖಾನ್ ಸಹ ಭಾಗವಹಿಸಿದ್ದರು.
ಗಾಳಿಪಟ ಉತ್ಸವಕ್ಕೂ ಮುನ್ನ ಸಲ್ಲು ಉತ್ತಮ ವ್ಯಕ್ತಿ ಈ ದೇಶದ ಮುಂದಿನ ಪ್ರಧಾನಿಯಾಗಲಿದ್ದು, ಮೋದಿಯವರು ದೇಶದ ನಾಯಕತ್ವ ವಹಿಸಿಕೊಳ್ಳಲು ಸಮರ್ಥ ವ್ಯಕ್ತಿ ಎಂದು ಮೋದಿಯನ್ನು ಹಾಡಿಹೊಗಳಿದ್ದಾರೆ.
ಉತ್ಸವದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಸಲ್ಮಾನ್, ಅವರು ನಾನು ಮೊದಲ ಬಾರಿಗೆ ಮೋದಿಯವರನ್ನು ಭೇಟಿ ಮಾಡಿದ್ದೇನೆ. ಈ ಭೇಟಿ ನನಗೆ ಖುಷಿ ತಂದಿದೆ ಎಂದಿದ್ದಾರೆ.
ಕೃಪೆ : -#kaushi #js #shetty (#hindu #rockss)
No comments:
Post a Comment