ಜೈ ತುಳು ನಾಡು....
ನೇತ್ರಾವತಿ ನದಿ ತಿರುವು ಯೋಜನೆ ಯಾನೆ
ಎತ್ತಿನಹೊಳೆ ಯೋಜನೆ!
ಇದು ಬಯಲು ಸೀಮೆಯ ಜನರ ಓಟಿಗಾಗಿ
ಕರಾವಳಿಯ ಜನರ ಅನ್ನ
ಕಸಿಯಲು ಮುಂದಾಗಿರುವ ಯೋಜನೆ ಹರ್ಷ
ಮೊಯ್ಲಿ ಎಂಬ ಇನ್ನೂ ಸರಿಯಾಗಿ
ಮೊಟ್ಟೆಯಿಂದ ಹೊರ ಬರದ ಮರಿ
ಪುಡಾರಿಯೊಬ್ಬ ಈ ಯೋಜನೆಯಿಂದ
ಕರಾವಳಿಯ ಜನರಿಗೆ ಯಾವುದೇ ಅಪಾಯವಿಲ್ಲ
ಅಂತ ಸರ್ಟಿಫಿಕೇಟ್ ಬೇರೆ ಕೊಡುತ್ತಿದ್ದಾನೆ...
ಯಾರಾದರೂ ಜೋರು ಮಾಡಿ ಕೇಳಿದರೆ ಆದರ
ಬಗ್ಗೆ ನಾನು ಯಾವುದೇ ಅಧ್ಯಯನ ಮಾಡಿಲ್ಲ
ಅಂತ ಹೇಳಿ ಜಾರಿ ಕೊಳ್ಳುತ್ತಾನೆ. ಆಧ್ಯಯನ
ಮಾಡದೆ ಮತ್ಯಾಕೆ ತೌಡು ತಿನ್ನಲು ಈತ
ರಾ ಜಕೀಯಕ್ಕೆ ಬಂದಿರೋದಾ..?
ನೇತ್ರಾವತಿಯನ್ನೇ ನಂಬಿರುವ
ಪುತ್ತೂರು ಪುರಸಭೆ,ಬಂಟ್ವಾಳ ಪುರಸಭೆ,
ಮಂಗಳೂರು ಮಹಾನಗರಪಾಲಿಕೆಗಳ ಗತಿ ಏನು..?
ಇವರಿಗೆ ಮೊಯ್ಲಿ ತನ್ನ ಊರಾದ
ಹೆಬ್ರಿಯಲ್ಲಿರುವ ಸೀತಾ ನದಿಯಿಂದ
ನೀರು ಕೊಡುತ್ತಾನೆಯೇ..?
ಇನ್ನು ಈ ನದಿಯ ಸೆರಗಿನಲ್ಲಿ
ಹಲವಾರು ಸಣ್ಣಪುಟ್ಟ
ಕಾರ್ಖಾನೆಗಳು ಇವೆ.ಉರುಂಬಿ,
ಸಹಸ್ರಲಿಂಗೇಶ್ವರದಂತ ಕಿರುವಿದ್ಯುತ್
ಯೋಜನೆಗಳಿವೆ.. ನೇತ್ರಾವತಿಯ
ನೀರನ್ನೇ ನಂಬಿರುವ ಇವುಗಳ ಗತಿ
ಏನಾಗಬೇಕು..?
ಅಷ್ಟಕ್ಕೂ ಈ ಯೋಜನೆ ರೂಪಿಸಿದ
ಮಹಾನುಭಾವನ ಮಂಡೆಗೆ ಕೊಡಬೇಕು..ಸಾವಿರ
ಹೆಚ್ ಪಿಯ ಪಂಪುಗಳನ್ನು ಬಳಸಿ
ಒಂದು ನದಿಯನ್ನು ಘಟ್ಟದ ಆಚೆಗೆ
ಎಸೆಯುವುದೆಂದರೆ ಇದು ಮೂರ್ಖತನವಲ್ಲದೆ
ಮತ್ತೇನು..?
ಒಂದು ನದಿ
ರಚನೆಯಾಗಲು ಸಾವಿರಾರು ವರ್ಷಗಳು ತಗುಲಿರುತ್ತವೆ
ಆ ಪ್ರಕೃತಿಯ ರಚನೆಯನ್ನು ,ಆ ರಚನೆಯೊಂದಿಗೆ
ಪ್ರಕೃತಿ ಮಾಡಿಕೊಂಡಿರುವ ಹೊಂದಾಣಿಕೆಗಳನ್ನು
ಕೇವಲ
ಒಂದು ಅಣೆಕಟ್ಟು ಅಥವಾ ಪಂಪು ಸೆಟ್ಟುಗಳಿಂದ
ಬದಲಾಯಿಸಲು ಸಾಧ್ಯವೇ..?
ನೇತ್ರಾವತಿ ನದಿಯ
ನೀರನ್ನು ಅಡ್ಡಹಾಕಲು ಇವರು ಆರಿಸಿರುವ
ಪ್ರದೇಶವಾದರೂ ಯಾವುದು..?
ಪಶ್ಚಿಮಘಟ್ಟದ ಆಯಕಟ್ಟಿನ ಜಾಗ.
ಇದು ಅಪರೂಪದ ಜೀವ ಹಾಗೂ ಸಸ್ಯ
ವೈವಿಧ್ಯತೆ ಹೊಂದಿದ ಪ್ರದೇಶ
ಎಂದು ಇದೇ ವಿರಪ್ಪಮೊಯ್ಲಿ
ನಿಭಾಯಿಸುತ್ತಿರುವ ಪರಿಸರ ಖಾತೆಯೇ ವರದಿ
ಮಾಡಿದೆ.
ಹಾಗಾದರೆ ಆ ಜೀವ ವೈವಿದ್ಯಗಳ ಗತಿ ಏನು..?
ಎಲ್ಲವೂ ಈ ಅವಿವೇಕಿಗಳ ಹುಚ್ಚಾಟಕ್ಕೆ
ಬಲಿಯಾಗಲಿದೆ.ಇನ್ನು ಕರಾವಳಿಯ ಜನರ ಪಾಲಿಗೆ
ನಾಯಿ ಕೆಚ್ಚಲಿನ ಹಾಲಾಗಿ ಹೋದ ಮಾಜಿ
ಮುಖ್ಯಮಂತ್ರಿ ಸದಾನಂದ ಗೌಡರಿಗೆ ಈ
ಯೋಜನೆಯ ಬಗ್ಗೆ ಕೇಳಿದರೆ ಕಾಮಾಟಿಪುರದ
ಕಲ್ಯಾಣಿಯ ಹಾಗೆ ಇದ್ದ
ಎಲ್ಲಾ ಹಲ್ಲು ಕಿರಿದು ಸಮಜಾಯಿಶಿ
ಕೊಡುತ್ತಾರೆ "ನಾವು ಮಳೆಗಾಲದಲ್ಲಿ
ಕಡಲು ಸೇರುವ ಹೆಚ್ಚುವರಿ ನೀರನ್ನು ಮಾತ್ರ
ಅಡ್ಡ ಹಾಕುತ್ತೇವೆ ಇದರಿಂದ
ಯಾವುದೇ ನಷ್ಟವಿಲ್ಲ"
ಈ ಗೌಡರಿಗೆ ಮಳೆಗಾಲದಲ್ಲಿ ಸಮುದ್ರಸೇರುವ
ನೀರು ತಡೆದರೆ ಹಾನಿ ಇಲ್ಲ್
ಅಂದವರು ಯಾರು..? ಮೀನು ಗಳು ತಮ್ಮ್
ವಂಶಾಭಿವೃದ್ದಿಗೆ ಸಿಹಿನೀರನ್ನೇ ಅವಲಂಬಿಸಿವೆ
ಅನ್ನುವ ಕನಿಷ್ಟ ಬುದ್ದಿಯೂ ಇವರಿಗೆ
ಬೇಡವೇ..?
ಈ ಸಿಹಿ ನೀರನ್ನು ತಡೆದರೆ ಮೀನುಗಳ
ಸಂತತಿಯೇ ನಾಶವಾಗುವುದಿಲ್ಲ್ವೆ..?
ಒಂದು ಕಡೆ ಭಾರಿ ಗಾತ್ರದ ವಿಷಜಂತುಗಳ ಹಾಗೆ
ತಲೆಯನ್ನು ಕಡಲಿಗೆ ಇಳಿಸಿರುವ ಎಂ ಆರ್ ಪಿ ಎಲ್
ನ ತ್ಯಾಜ್ಯದ ಪೈಪುಗಳು ಇನ್ನೊಂದೆಡೆ
ನಾಗಾರ್ಜುನದ ಪೈಪುಗಳು...
ನಡುಗಡಲಲ್ಲಿ ಇಡೀ ಮತ್ಸ್ಯೋಧ್ಯಮವನ್ನ
ೇ ಹಾಳುಗೆಡಹುತ್ತಿರುವ ವಿದೇಶಿ ಯಾಂತ್ರೀಕೃತ
ಮೀನುಗಾರಿಕೆ.
ಅದು ಸಾಕಾಗಲಿಲ್ಲ ಅನ್ನೋದಕ್ಕೆ ಈ ಮನೆಹಾಳ
ರಾಜಕಾರಣಿಗಳು ಕಡಲಿನ ಮೂಲ
ಆಧಾರವಾಗಿರುವ ಸಿಹಿ
ನೀರನ್ನೇ ಅಡ್ದಹಾಕಲು ಹೊರಟಿದ್ದಾರೆ..
ಬಡಪಾಯಿ ಮೀನುಗಾರರ ಪರಿಸ್ಥಿತಿ
ಏನಾಗಬೇಡ..?
ಬಂಟ್ವಾಳದ ಜಕ್ರಿಬೆಟ್ಟು ಬಳಿ ಭಾರಿ ಗಾತ್ರ್ದ
ಪೈಪುಗಳನ್ನು ನೇತ್ರಾವತಿಗೆ ಇಳಿಸಿದ್ದಾರೆ.
ವಿಶೇಷ ಆರ್ಥಿಕವಲಯದಲ್ಲಿ ತಲೆ ಎತ್ತಲಿರುವ
ಎಲ್ಲಾ ಕಂಪನಿಗಳಿಗೆ ಈ
ಪೈಪಿನಿಂದಲೇ ನೀರು ಸರಬರಾಜಾಗಲಿದೆಯಂತೆ
!!!!
ಕೇಳುವಾಗ ನಗು ಕೂಡ ಬರುತ್ತದೆ. ಒಟ್ಟಿನಲ್ಲಿ
ರಾಜಕಾರಣಿಗಳ ನರಿ ಬುದ್ದಿಗೆ ಕರಾವಳಿಯ ಜೀವ
ನದಿಯೊಂದು ಬಲಿಯಾಗುತ್ತಿದೆ.
ಮೊಯ್ಲಿಯಾದರೋ..ಸೋನಿಯಾಳ ಮನೆಯ
ನಳ್ಳಿ ನೀರನ್ನೇ ನಂಬಿರುವವ ಅವನಿಂದ ಹೆಚ್ಚಿನ
ನಿರೀಕ್ಷೆ ಏನೂ ಇಲ್ಲ.
ಆದರೆ ಪುತ್ತೂರಿನ ಸದಾನಂದ ಗೌಡರಿಗೆ
ನೇತ್ರಾವತಿಯ ಋಣವಿಲ್ಲವೇ ..? ಈ ಭಾಗದ
ಕೃಷಿಕರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲವೆ..?
ನಿಮ್ಮ ಈ ಪಾಪಕೃತ್ಯಗಳಿಂದಾಗ
ಿಯೇ ಇಂದು ಸೂಕ್ತ ನೆಲೆ ಇಲ್ಲದೆ
ಅಂಡು ಸುಟ್ಟ----ರಂತೆ ಮೈಸೂರು,ಉಡುಪಿ,ಚಿ
ಕ್ಕಬಳ್ಳಾಪುರ,
ಬೆಂಗಳೂರು..ಹೀಗೇ ಊರೂರು ಅಲೆಯುವ
ಪರಿಸ್ಥಿತಿ ಬಂದಿರೋದು.
ಆದರೆ ಕಾಲ ಇನ್ನೂ ಮಿಂಚಿಲ್ಲ.ಈಗ ಜನಾರ್ಧನ
ಪೂಜಾರಿ ಬಣ ವಿಜಯಕುಮಾರ್ ಶೆಟ್ಟಿ ಅವರ
ಮುಂದಾಳುತ್ವದಲ್ಲಿ ಮೊಯ್ಲಿ ಮಗನನ್ನು ಬಲಿ
ಕೊಡಲು ಎಲ್ಲಾ ತಯಾರಿ ನಡೆಸಿ ನೇತ್ರಾವತಿ
ಉಳಿಸಿ ಆಂದೋಲನ ಪ್ರಾರಂಬಿಸಿದೆ.
ತಾವೂ ಪಕ್ಷಭೇದ ಮರೆತು ಇದರಲ್ಲಿ
ತೊಡಗಿಕೊಳ್ಳಿ. ಸ್ವಲ್ಪಮಟ್ಟಿಗಾದರೂ ಪಾಪ
ಪರಿಹಾರವಾದೀತು.
.
ಚೀನಾ ಅಮೇರಿಕಾದಂತ
ದೇಶಗಳೇ ತಾವು ತಿರುಗಿಸಿದ ನದಿಯನ್ನು ಮತ್ತೆ
ಸರಿಗೊಳಿಸುತ್ತಿವೆ
ಅದನ್ನು ನೋಡಿಯಾದರೂ ನಾವು ಎಚ್ಚೆತ್ತುಕೊಳ್ಳೊ
ಣ.
ಕಾಲ ಇನ್ನೂ ಮಿಂಚಿಲ್ಲ ನೇತ್ರಾವತಿ
ತಿರುಗಿಸುತ್ತೇವೆ ಎಂದವರ ಮಂಡೆ
ತಿರುಗಿಸೋಣ..ಜನರ ಜೀವನದ ಜೊತೆ
ಚೆಲ್ಲಾಟವಾಡುವ ಯಾವುದೇ ಪಕ್ಷ
ಅಥವಾ ರಾಜಕಾರಣಿಗಳನ್ನು ನಾವು ಸಹಿಸಿಕೊಳ್ಳೂವ
ಅಗತ್ಯವಿಲ್ಲ.
ಈ ಯೋಜನೆ ಜಾರಿಗೆ ಬಂದದ್ದೇ ಆದರೆ
ಮಂಜುನಾಥನ ಆಭಿಷೇಕಕ್ಕೆ ಮಾರ್ಚ್ ನಂತರ
ನೇತ್ರಾವತಿ ನೀರು ತರಲು ಎತ್ತಿನ
ಹೊಳೆಗೇ ಹೋಗಬೇಕಾದೀತು..ಹುಷಾರ್..!
ಜೈ ನೇತ್ರಾವತಿ
ಜೈ ತುಳುನಾಡು
ಕೃಪೆ :-#kaushi js shetty (hindu rockss)
No comments:
Post a Comment