ತುಳು ಚಿತ್ರರಂಗದಲ್ಲಿ ಸ್ಪರ್ಧೆಗಿಂತ ವೈಯಕ್ತಿಕ ಪ್ರತಿಷ್ಠೆ ಈಗ ತೀವ್ರ ಸದ್ದು ಮಾಡುತ್ತಿದೆ. ದಿನ ಬೆಳಗಾಗುತ್ತಿದ್ದಂತೆ ಪತ್ರಿಕೆಗಳಲ್ಲಿ ಜನ 'ರಂಗ್', 'ಚಾಲಿಪೋಲಿಲು', 'ಮದಿಮೆ', 'ಬೇರೆ ದೇವು ಪೂಂಜೆ' ಚಿತ್ರಗಳ ಜಾಹಿರಾತುಗಳನ್ನು ಮಾತ್ರ ನೋಡುತ್ತಿಲ್ಲ. ಮದಿಮೆ ಮತ್ತು ಚಾಲಿ ಪೋಲಿಗಳ ಕಚ್ಚಾಟವನ್ನೂ ಸಿನಿಮಾದಂತೆ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ! ಮದಿಮೆ ತಂಡ ಮುಂಚಿನಿಂದಲೂ ಪತ್ರಿಕೆ ಜಾಹಿರಾತುಗಳಲ್ಲಿ ಕಾಲೆಳಿತಾ ಬಂದಿತ್ತು. ಆದ್ರೆ ಮದಿಮೆ ಬಿಡುಗಡೆ ಆದ ಮೇಲೆ ಜಯಕಿರಣದಲ್ಲಿ ಮದಿಮೆಯ ಮೇಲೆ 'ಅತ್ಯಾಚಾರವೇ' ಆಗುತ್ತಿದೆ.! ಇದನ್ನೇಲ್ಲಾ ನೋಡುತ್ತಿರುವ ತುಳುವರಿಗೆ, ಈ ರೀತಿಯ ಸ್ಪರ್ಧೆ ತುಳು ಚಿತ್ರರಂಗಕ್ಕೆ ಒಳ್ಳೆಯ ಬೆಳವಣಿಗೆಯೇ ಅಥವಾ ಕೆಟ್ಟ ಸಂದೇಶವೇ ಅನ್ನೋದು ಪ್ರಶ್ನೆಯಾಗಿ ಕಾಡುತ್ತಿದೆ. ಆದ್ರೆ ಇಂತಹ ಬೆಳವಣಿಗೆಗಳಿಗೆ ತಲೆಕೆಡಿಸಿಕೊಳ್ಳದೆ, ಎಲ್ಲಾ ಚಿತ್ರಗಳನ್ನು ತುಳುವರು ಗೆಲ್ಲಿಸಲಿ, ಒಳ್ಳೆಯ ಚಿತ್ರಗಳನ್ನು ಸ್ವಲ್ಪ ಜಾಸ್ತಿ ಗೆಲ್ಲಿಸಲಿ ಅನ್ನೋದು ನಮ್ಮ ಅಭಿಪ್ರಾಯ ದಾದ ಪನ್ಪರ್?
#news_copy_from_ TULU NADU (Official)
#news_copy_from_ TULU NADU (Official)